*ಕೊಪ್ಪ:-ಸಾರ್ವಜನಿಕರ ಓಡಾಟಕ್ಕಿಲ್ಲ ಫುಟ್ ಬಾತ್ ಭಾಗ್ಯ:- ಫುಟ್ ಬಾತ್ ಮೇಲೆ ಖಾಯಂ ಅಂಗಡಿಗಳದ್ದೇ ರಾಜ್ಯಬಾರ:- ತೆರವಿಗೆ ಸಾರ್ವಜನಿಕರ ಆಗ್ರಹ*:-
ಕೊಪ್ಪ ಪಟ್ಟಣದ ಹಲವಾರು ಕಡೆ ಸಾರ್ವಜಿನಿಕರ ಓಡಾಟಕ್ಕೆ ಇರುವ ಫುಟ್ ಬಾತ್ ಗಳಲ್ಲಿ ಖಾಯಂ ಹಣ್ಣು ತರಕಾರಿ ಮತ್ತು ಗೂಡಂಗಂಡಿಗಳು ಅಕ್ರಮವಾಗಿ ನೆಲೆಯೂರಿದ್ದು ಇದರ ಬಗ್ಗೆ ಹಲವಾರು ಬಾರಿ ನಾಗರೀಕರು ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ಆಗದೆ ಇರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ಸಹ ಸಾರ್ವಜನಿಕರ ಓಡಾಡಲು ಇರುವ ಫುಟ್ ಬಾತ್ ಮೇಲೆ ಅಂಗಡಿ ಆಕ್ರಮವಾಗಿ ಇದ್ದರೆ ಅದನ್ನು ತಕ್ಷಣವೇ ತೆರವುಗೊಳಿಸಲು ಆದೇಶ ನೀಡಿದೆ.ಇದರಂತೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ಮಹಾನಗರಗಳಲ್ಲಿ ಕಳೆದ ಎರಡು ತಿಂಗಳಿನಿಂದ ಫುಟ್ ಬಾತ್ ಮೇಲೆ ಅಕ್ರಮವಾಗಿ ನೆಲೆಯೂರಿರುವ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಕೊಪ್ಪ ಪಟ್ಟಣದಲ್ಲಿ ಮಾತ್ರ ಫುಟ್ ಬಾತ್ ಕಾಣದಂತೆ ಶೀಟಿನ ಹೊದಿಕೆ ಹಾಕಿ ಖಾಯಂ ಅಂಗಡಿಗಳು ತಲೆ ಎತ್ತಿ ಸುಮಾರು ವರ್ಷಗಳೇ ಕಳೆದಿದೆ. ಇದರ ಬಗ್ಗೆ ಕೊಪ್ಪ ನಾಗರಿಕ ಹಿತರಕ್ಷಣಾ ಸಮಿತಿ, ಸೇರಿದಂತೆ ಹಿರಿಯ ನಾಗರಿಕರು ಹಲವಾರು ಬಾರಿ ಪಟ್ಟಣ ಪಂಚಾಯಿತಿಗೆ ,ಪೋಲಿಸ್ ಠಾಣೆಗೆ ಮನವಿ ಕೊಟ್ಟಿದ್ದಾರೆ .ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಇದನ್ನು ತೆರವುಗೊಳಿಸುವ ಗೋಜಿಗೆ ಪಟ್ಟಣ ಪಂಚಾಯಿತಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ಸಹ ಹೋಗಲಿಲ್ಲ. ಆದರೆ ಈಗ ಪಟ್ಟಣ ಪಂಚಾಯಿತಿ ಅವಧಿ ಮುಗಿದು ತಹಶಿಲ್ದಾರರ ಆಡಳಿತ ಇರುವುದರಿಂದ ಇನ್ನಾದರೂ ಫುಟ್ ಬಾತ್ ತೆರವುಗೊಳಿಸಿ ನಾಗರಿಕರು ಓಡಾಡಲು ಅನುವು ಮಾಡಿಕೊಡಬಹುದು ಎಂದು ಸಾರ್ವಜನಿಕರು ಸಹ ತಾಳ್ಮೆಯಿಂದ ಕಾದು ನೋಡಿದರು, ಆದರೆ ಪರಿಸ್ಥಿತಿ ಮಾತ್ರ ಹಾಗೆ ಉಳಿದಿದೆ,ಇನ್ನೂ ಹೆಚ್ಚಿನ ಅಂಗಡಿಗಳು ಆ ಸ್ಥಳಗಳಲ್ಲಿ ಬರುತ್ತಲೇ ಇದ್ದು ಮುಂದೊಂದು ದಿನ ಕೊಪ್ಪ ಪಟ್ಟಣದಲ್ಲಿ ಫುಟ್ ಬಾತ್ ಗಳೇ ಮಾಯವಾದರೂ ಆಶ್ಚರ್ಯವಿಲ್ಲ ಎನ್ನುವ ಹಾಗಾಗಿದೆ. ಇದಲ್ಲದೇ ಹಲವಾರು ಕಡೆಗಳಲ್ಲಿ ಫುಟ್ ಬಾತ್ ಮೇಲೆ ಅಂಗಡಿ ಮಾಲೀಕರು ತಮ್ಮ ಸರಕು ಜೋಡಿದಿ ಸಾರ್ವಜನಿಕರು ಓಡಾಡಲು ಅನಿವಾರ್ಯವಾಗಿ ರಸ್ತೆ ಗೆ ಇಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಹಲವಾರು ಬಾರಿ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಹಿರಿಯ ನಾಗರಿಕರಿಗೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾದ ಉದಾಹರಣೆ ಸಹ ಇದೆ. ಕೊಪ್ಪ ವೀರಭದ್ರ ದೇವಸ್ಥಾನದಿಂದ ವಾಟರ್ ಟ್ಯಾಂಕ್ ವರೆಗೆ ರಸ್ತೆ ಅಗಲ ಮಾಡಿದ್ದರೂ ಸಹ ಅದರ ಪ್ರಯೋಜನ ವಾಹನ ನಿಲುಗಡೆಗೂ ಸಹ ಇಲ್ಲ .ಇಲ್ಲಿ ಸಹ ರಸ್ತೆ ಬದಿ ಅಂಗಡಿಗಳು ತಲೆ ಎತ್ತಿ ಸಾರ್ವಜನಿಕರಿಗೆ ಮತ್ತದೇ ತೊಂದರೆ. ಈ ಫುಟ್ ಬಾತ್ ಮೇಲೆ ಮತ್ತು ರಸ್ತೆ ಮೇಲೆ ಹಲವಾರು ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವವರಿಗೆ ಹಳೇ ಪಟ್ಟಣ ಪಂಚಾಯಿತಿ ಜಾಗ ,ಸಂತೆ ಮಾರ್ಕೆಟ್ ಜಾಗ, ಅಥವಾ ಇನ್ನೂ ಖಾಲಿ ಇರುವ ಬೇರೆ ಯಾವುದೇ ಜಾಗದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲು ತಕ್ಷಣವೇ ಪಟ್ಟಣ ಪಂಚಾಯಿತಿ ಮತ್ತು ಆಡಳಿತ ಪಕ್ಷದ ಶಾಸಕರು ಹಾಗೂ ತಹಶಿಲ್ದಾರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಹಲವಾರು ಹಿರಿಯ ನಾಗರಿಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಾರ್ವಜನಿಕರು ರಸ್ತೆ ಮೇಲೆ ಓಡಾಡಲು ಇಳಿದು ಅಪಘಾತವಾಗಿ ಜೀವ ಕಳೆದುಕೊಳ್ಳುವುದರೊಳಗೆ ಈ ಸಮಸ್ಯೆಗೆ ಆದಷ್ಟು ಬೇಗ ಶಾಶ್ವತ ಪರಿಹಾರ ಹುಡುಕಬೇಕಾದ ಮಹತ್ತರ ಜವಾಬ್ದಾರಿ ಸ್ಥಳೀಯ ಶಾಸಕರು ಮತ್ತು ಆಡಳಿತ ವ್ಯವಸ್ಥೆಯದ್ದಾಗಿರುತ್ತದೆ. ಸಾರ್ವಜನಿಕರು ನಡೆದು ಹೋಗಲು ಇರುವ ಫುಟ್ ಬಾತ್ ಕೇಳುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಈಗಾಗಲೇ "ಸುಪ್ರೀಂ ಕೋರ್ಟ್" ಸ್ಪಷ್ಟವಾಗಿ ಆದೇಶಿಸಿದೆ. ಇದನ್ನು ಕೊಡುವುದು ಸರ್ಕಾರ ಮತ್ತು ಆಡಳಿತ ನಡೆಸುವವರ ಹೊಣೆಗಾರಿಕೆ ಆಗಿರುವುದರಿಂದ ಆದಷ್ಟು ಶೀಘ್ರವಾಗಿ ಕೊಪ್ಪ ಪಟ್ಟಣದ ನಾಗರಿಕರಿಗೆ ಇದನ್ನು ಒದಗಿಸುವ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆ ಹೆಜ್ಜೆ ಇಡಲಿ ಎಂದು ಕೊಪ್ಪದ ಸಮಸ್ತ ನಾಗರಿಕರು ಒತ್ತಾಯಿಸಿದ್ದಾರೆ.ಇಲ್ಲದೇ ಹೋದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ರೂಪಿಸಿ ತಮ್ಮ ಹಕ್ಕನ್ನು ಪಡೆಯುವ ಎಚ್ಚರಿಕೆ ಸಹ ನೀಡಿದ್ದಾರೆ.
ಚಿಕ್ಕಮಗಳೊರು
ಕೊಪ್ಪ
Police
ಕುದುರೆಗುಂಡಿ
ಜಯಪುರ
ತೀರ್ಥಹಳ್ಳಿ
ಬಾಳೆಹೊನ್ನೂರು
ಹರಿಹರಪುರ
*ಫುಟ್ ಬಾತ್ ಮೇಲೆ ಅಂಗಡಿ* ಸಾರ್ವಜನಿಕರ ಆಕ್ರೋಶ:-
ಕೊಪ್ಪ:-*ಸಾರ್ವಜನಿಕರ ಓಡಾಟಕ್ಕಿಲ್ಲ ಫುಟ್ ಬಾತ್ ಭಾಗ್ಯ:- ಫುಟ್ ಬಾತ್ ಮೇಲೆ ಖಾಯಂ ಅಂಗಡಿಗಳದ್ದೇ ರಾಜ್ಯಬಾರ:- ತೆರವಿಗೆ ಸಾರ್ವಜನಿಕರ ಆಗ್ರಹ*:-
ಹಿಂದಿನ ಸುದ್ದಿ
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.
Share this article
ಈ ವಿಭಾಗದ ಸುದ್ದಿಗಳು
*ಫುಟ್ ಬಾತ್ ಮೇಲೆ ಅಂಗಡಿ* ಸಾರ್ವಜನಿಕರ ಆಕ್ರೋಶ:-
1 week ago
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.
2 months ago
ಸಿದ್ಧರಮಠದಲ್ಲಿ ರಕ್ತದಾನ ಶಿಬಿರ
2 months ago
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ
3 months ago